Monday, 16 November 2026 — Sugandha TV Kannada

Sugandha TV Kannada

News website

BREAKING NEWS
📢 ಉದ್ಯೋಗ ಮಾಹಿತಿ ರೈಲ್ವೆ ನೇಮಕಾತಿ ಮಂಡಳಿಯಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ – 2026 ವಿಶೇಷ ಲೇಖನ ಬೆಂಗಳೂರಿಗೆ ಪಿಂಕ್ ಕನಸು ನನಸು! ವಿಶೇಷ ಲೇಖನ ನವೆಂಬರ್ 1 – ಕರ್ನಾಟಕ ರಾಜ್ಯೋತ್ಸವ ನಮ್ಮ ಕನ್ನಡ ಹೆಮ್ಮೆ ವಿಶೇಷ ಲೇಖನ ಕತ್ತಲೆಯಿಂದ ಬೆಳಕಿನೆಡೆಗೆ – ದೀಪಾವಳಿ ಎಂದರೆ ಕೇವಲ ಹಬ್ಬವಲ್ಲ, ಒಂದು ಜೀವನ ಪಾಠ! ಸುಗಂಧ ಸಂಚಾರಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ್ಯ  ಕರ್ನಾಟಕದಲ್ಲಿ  ಪ್ರವಾಸೋದ್ಯಮದ ಮಹತ್ವ ಮತ್ತು ಅಭಿವೃದ್ಧಿ         ಸಂಪಾದಕೀಯ ಸಂಪಾದಕೀಯ ಓದುಗರ ರುಚಿ ಅರಿತು, ನೊಂದವರ ಧ್ವನಿಯಾದ ನೈಜ ಪತ್ರಿಕೋದ್ಯಮದ ಹೆಜ್ಜೆ 📢 ಉದ್ಯೋಗ ಮಾಹಿತಿ ರೈಲ್ವೆ ನೇಮಕಾತಿ ಮಂಡಳಿಯಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ – 2026 ವಿಶೇಷ ಲೇಖನ ಬೆಂಗಳೂರಿಗೆ ಪಿಂಕ್ ಕನಸು ನನಸು! ವಿಶೇಷ ಲೇಖನ ನವೆಂಬರ್ 1 – ಕರ್ನಾಟಕ ರಾಜ್ಯೋತ್ಸವ ನಮ್ಮ ಕನ್ನಡ ಹೆಮ್ಮೆ ವಿಶೇಷ ಲೇಖನ ಕತ್ತಲೆಯಿಂದ ಬೆಳಕಿನೆಡೆಗೆ – ದೀಪಾವಳಿ ಎಂದರೆ ಕೇವಲ ಹಬ್ಬವಲ್ಲ, ಒಂದು ಜೀವನ ಪಾಠ! ಸುಗಂಧ ಸಂಚಾರಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ನಿಮಿತ್ತ್ಯ  ಕರ್ನಾಟಕದಲ್ಲಿ  ಪ್ರವಾಸೋದ್ಯಮದ ಮಹತ್ವ ಮತ್ತು ಅಭಿವೃದ್ಧಿ         ಸಂಪಾದಕೀಯ ಸಂಪಾದಕೀಯ ಓದುಗರ ರುಚಿ ಅರಿತು, ನೊಂದವರ ಧ್ವನಿಯಾದ ನೈಜ ಪತ್ರಿಕೋದ್ಯಮದ ಹೆಜ್ಜೆ
LIVE MARKETS
SENSEX 81,420.50 ▲ +0.48%
NIFTY 50 24,964.25 ▲ +0.55%
GOLD (24K) ₹76,420 ▼ -0.12%
SILVER ₹91,200 ▲ +0.80%
USD/INR ₹84.06 ▲ +0.05%
BITCOIN $68,450 ▲ +2.34%
CRUDE OIL $78.10 ▼ -0.65%
ವಿಶೇಷ ಲೇಖನ

ಬೆಂಗಳೂರಿಗೆ ಪಿಂಕ್ ಕನಸು ನನಸು!

Sugandha
ವರದಿ: Sugandha ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 17 ವೀಕ್ಷಣೆಗಳು

ಅಗ್ರಹಾರದಿಂದ ಹೊರಟ ಮೆಟ್ರೋ, ಇಡೀ ಬೆಂಗಳೂರನ್ನೇ ಒಂದಾಗಿಸಲಿದೆ!
   ಬೆಂಗಳೂರು ನಗರ ಇತಿಹಾಸದಲ್ಲೇ ಮರೆಯಲಾಗದ ದಿನ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ನಮ್ಮ ಮೆಟ್ರೋ ಪಿಂಕ್ ಲೈನ್ ಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೂಡಿ ಮೋದಿ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಿದ ದೃಶ್ಯ, ಇಡೀ ಕರ್ನಾಟಕವೇ ನೋಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಯಾದರೆ ಅಭಿವೃದ್ಧಿ ಹೇಗಿರುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ!

ಈ ಮೆಟ್ರೋ ಎಲ್ಲಿಂದ ಶುರುವಾಗಿ ಎಲ್ಲಿಗೆ ಹೋಗುತ್ತೆ?

ಪಿಂಕ್ ಲೈನ್ ಅಂದ್ರೆ ಸುಮ್ಮನೆ ಒಂದು ಲೈನ್ ಅಲ್ಲ ಸರ್, ಇದು ಬೆಂಗಳೂರಿನ ಉತ್ತರ – ದಕ್ಷಿಣವನ್ನ ಜೋಡಿಸುವ ಜೀವನಾಡಿ!

ಪೂರ್ತಿ ಮಾರ್ಗ: ಕಾಳೇನ ಅಗ್ರಹಾರ (ಗೊಟ್ಟಿಗೆರೆ) – ನಾಗವಾರ
ಪೂರ್ತಿ ಉದ್ದ: 21.26 ಕಿ.ಮೀ
ಒಟ್ಟು ನಿಲ್ದಾಣಗಳು: 18 ನಿಲ್ದಾಣಗಳು – 6 ಎಲಿವೇಟೆಡ್ + 12 ಭೂಗತ

ಈಗ ಉದ್ಘಾಟನೆಯಾಗಿರುವುದು ಮೊದಲ ಹಂತ ಮಾತ್ರ!

ಈಗ ಶುರುವಾದ ಮಾರ್ಗ: ಕಾಳೇನ ಅಗ್ರಹಾರ – ತಾವರೆಕೆರೆ / ಸುದ್ದಗುಂಟೆಪಾಳ್ಯ (SG ಪಾಳ್ಯ)
ಉದ್ದ:7.5 ಕಿ.ಮೀ ಎಲಿವೇಟೆಡ್ ಮಾರ್ಗ
ಖರ್ಚು: ಸುಮಾರು ರೂ. 3,470 ಕೋಟಿ
ಸಾರ್ವಜನಿಕರಿಗೆ ಶುರು: ನವೆಂಬರ್ 14 ಬೆಳಿಗ್ಗೆ 6 ಗಂಟೆಯಿಂದ

ಈ 7.5 ಕಿ.ಮೀ ಮಾರ್ಗದಿಂದಲೇ ಬೆಂಗಳೂರಿನ ನಮ್ಮ ಮೆಟ್ರೋ ಜಾಲ 100 ಕಿ.ಮೀ ಗಡಿ ದಾಟಿದೆ! ಭಾರತದಲ್ಲೇ 2ನೇ ಅತಿದೊಡ್ಡ ಮೆಟ್ರೋ ಜಾಲ ಅನ್ನೋ ಹೆಗ್ಗಳಿಕೆ ಬೆಂಗಳೂರಿಗೆ ಸಿಕ್ಕಿದೆ!

ಈಗ ಓಪನ್ ಆದ 6 ನಿಲ್ದಾಣಗಳು ಯಾವುವು?
ನಿಲ್ದಾಣ ವಿಶೇಷತೆ

1. ಕಾಳೇನ ಅಗ್ರಹಾರ ಆರಂಭದ ನಿಲ್ದಾಣ, ಗೊಟ್ಟಿಗೆರೆ ಬಳಿ

2. ಹುಳಿಮಾವು ಬನ್ನೇರುಘಟ್ಟ ರಸ್ತೆ

3. ಬಿಲೇಕಹಳ್ಳಿ – IIMB ಮೊದಲು IIMB ಅಂತಿತ್ತು, ಈಗ ಹೆಸರು ಬದಲಾಗಿದೆ

4. NS ಪಾಳ್ಯ – ಜೆಪಿ ನಗರ 4ನೇ ಹಂತ ಮೊದಲು ಜೆಪಿ ನಗರ ಅಂತಿತ್ತು

5. ಜಯದೇವ ಆಸ್ಪತ್ರೆ ಇಲ್ಲಿ ಎಲ್ಲೋ ಲೈನ್ ಗೆ ಬದಲಾಯಿಸಬಹುದು

6. SG ಪಾಳ್ಯ (ತಾವರೆಕೆರೆ) ಸದ್ಯಕ್ಕೆ ಕೊನೆಯ ನಿಲ್ದಾಣ


ಮುಂದೆ ಬರೋ ಭೂಗತ ಮಾರ್ಗದಲ್ಲಿ ಡೈರಿ ಸರ್ಕಲ್, ಲಕ್ಕಸಂದ್ರ, ಲ್ಯಾಂಗ್ ಫರ್ಡ್ ಟೌನ್, ಎಂಜಿ ರಸ್ತೆ, ಶಿವಾಜಿ ನಗರ, ಕಂಟೋನ್ಮೆಂಟ್, ಪಾಟರಿ ಟೌನ್, ಟ್ಯಾನರಿ ರಸ್ತೆ, ವೆಂಕಟೇಶಪುರ, ಕಾಡುಗುಂಡನಹಳ್ಳಿ, ನಾಗವಾರ ನಿಲ್ದಾಣಗಳು ಬರಲಿವೆ. ಈ ಭೂಗತ ಮಾರ್ಗ ಸುಮಾರು 13.76 ಕಿ.ಮೀ ಉದ್ದವಿದ್ದು, 2027ರ ಮಾರ್ಚ್ ವೇಳೆಗೆ ಶುರುವಾಗುವ ನಿರೀಕ್ಷೆ ಇದೆ.

ಮೋದಿ – ಡಿಕೆಶಿ ಜೋಡಿಯ ಅನನ್ಯತೆ ಏನು?

ಮೊನ್ನೆಯ ಉದ್ಘಾಟನೆಯಲ್ಲಿ ಅತ್ಯಂತ ವಿಶೇಷವಾಗಿದ್ದು ಇದೇ ಸರ್!

ಪ್ರಧಾನಿ ಮೋದಿ ಅವರು ತಾವರೆಕೆರೆಯಿಂದ IIM ಬೆಂಗಳೂರು ನಿಲ್ದಾಣದವರೆಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಜೊತೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದ್ದರು.

ಮೋದಿ ಅವರು ಮೆಟ್ರೋದಲ್ಲಿ ಹೋಗುವಾಗ ಡಿಕೆಶಿ ಅವರಿಗೆ ಮಾರ್ಗದ ಬಗ್ಗೆ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ ಮಾತಾಡಿದರು. ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು, ಬೆಂಗಳೂರಿನ ಅಭಿವೃದ್ಧಿಗೆ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಜನರಿಗೆ ತುಂಬಾ ಖುಷಿ ಕೊಟ್ಟಿತು.

ರಾಜ್ಯ ಸರ್ಕಾರದ ಬೇಡಿಕೆಗೆ ಸ್ಪಂದಿಸಿ ಮೂರು ನಿಲ್ದಾಣಗಳ ಹೆಸರನ್ನೂ ಬದಲಾಯಿಸಲಾಗಿದೆ – IIMB ಈಗ ಬಿಲೇಕಹಳ್ಳಿ-IIMB, ಜೆಪಿ ನಗರ 4ನೇ ಹಂತ ಈಗ NS ಪಾಳ್ಯ-ಜೆಪಿ ನಗರ 4ನೇ ಹಂತ, ತಾವರೆಕೆರೆ ಈಗ SG ಪಾಳ್ಯ! ಇದು ಸ್ಥಳೀಯರ ಭಾವನೆಗೆ ಕೊಟ್ಟ ಗೌರವ!

ಬೆಂಗಳೂರಿಗರಿಗೆ ಏನು ಲಾಭ?

ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿದಿನ ಲಕ್ಷಾಂತರ ಜನ ಟ್ರಾಫಿಕ್ ನಲ್ಲಿ ಸಿಲುಕುತ್ತಿದ್ದರು. ಈಗ ಕಾಳೇನ ಅಗ್ರಹಾರದಿಂದ SG ಪಾಳ್ಯಕ್ಕೆ ಕೇವಲ ಕೆಲವೇ ನಿಮಿಷಗಳಲ್ಲಿ ಹೋಗಬಹುದು. ಜಯದೇವ ಆಸ್ಪತ್ರೆಯಲ್ಲಿ ಎಲ್ಲೋ ಲೈನ್ ಗೆ ಬದಲಾಯಿಸಿ ಎಲೆಕ್ಟ್ರಾನಿಕ್ ಸಿಟಿಗೆ ಹೋಗಬಹುದು. ಮುಂದೆ ಪೂರ್ತಿ ಲೈನ್ ಶುರುವಾದರೆ, ಕಾಳೇನ ಅಗ್ರಹಾರದಿಂದ ನಾಗವಾರಕ್ಕೆ ಸುಮಾರು 45-50 ನಿಮಿಷಗಳಲ್ಲಿ ಹೋಗಬಹುದು. MG ರಸ್ತೆಯಲ್ಲಿ ಪರ್ಪಲ್ ಲೈನ್ ಗೆ, ನಾಗವಾರದಲ್ಲಿ ಬ್ಲೂ ಲೈನ್ (ಏರ್ ಪೋರ್ಟ್ ಲೈನ್) ಗೆ ಸಂಪರ್ಕ ಸಿಗುತ್ತೆ!

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 6 ಲೇಖನಗಳು

Sugandha

Sugandha ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment