Wednesday, 18 November 2026 — Sugandha TV Kannada

Sugandha TV Kannada

News website

BREAKING NEWS
ಜೀವನಶೈಲಿ (Lifestyle) ಪ್ರತಿದಿನ ಬೆಳಗ್ಗೆ ಅನುಸರಿಸಬೇಕಾದ 10 ಆರೋಗ್ಯಕರ ಅಭ್ಯಾಸಗಳು | ಆರೋಗ್ಯಕರ ಜೀವನಕ್ಕೆ ಸರಳ ಮಾರ್ಗಗಳು 📢 ಉದ್ಯೋಗ ಮಾಹಿತಿ ಗ್ರಾಮಾಂತರ ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದ ಮಹಿಳೆಯರಿಗೆ ಅವಕಾಶ! 📢 ಉದ್ಯೋಗ ಮಾಹಿತಿ ಕಲಬುರಗಿ ಜಿಲ್ಲಾ ನ್ಯಾಯಾಲಯ ನೇಮಕಾತಿ 2026 – 29 ಹುದ್ದೆಗಳಿಗೆ ಅರ್ಜಿ ಆಹ್ವಾನ ಕೃಷಿ / ರೈತ ಲೋಕ (Agriculture / Farmers World). ಡಿಸೆಂಬರ್‌ನಲ್ಲಿ ಕಲ್ಲಂಗಡಿ ಬಿತ್ತನೆಗೆ ಆದ್ಯತೆ ನೀಡಿ; 60–75 ದಿನಗಳಲ್ಲಿ ಫಸಲು ಪಡೆಯಲು ರೈತರಿಗೆ ಉತ್ತಮ ಅವಕಾಶ! ಪಂಚಾಯತ್ ರಾಜ್ ಪಂಚಾಯತ್ ರಾಜ್ ವ್ಯವಸ್ಥೆ KPSC, FDA, SDA, PSI, PDO, KAS ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ 📢 ಉದ್ಯೋಗ ಮಾಹಿತಿ ಇಂಡಿಯನ್ ಆಯಿಲ್ ನೇಮಕಾತಿ 2026: 409 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇತಿಹಾಸ ಕದಂಬ ಸಾಮ್ರಾಜ್ಯ: ಕರ್ನಾಟಕದ ಮೊದಲ ರಾಜವಂಶದ ಉದಯ ಮತ್ತು ಪತನ ರಾಜಕೀಯ ಸವಾಲುಗಳ ನಡುವೆಯೂ ಪಕ್ಷವನ್ನು ಕಟ್ಟಿ ಬೆಳೆಸಿದ ‘ಕಾಂಗ್ರೆಸ್ ಶಕ್ತಿ’ ಸೋನಿಯಾ ಗಾಂಧಿ. ಜೀವನಶೈಲಿ (Lifestyle) ಪ್ರತಿದಿನ ಬೆಳಗ್ಗೆ ಅನುಸರಿಸಬೇಕಾದ 10 ಆರೋಗ್ಯಕರ ಅಭ್ಯಾಸಗಳು | ಆರೋಗ್ಯಕರ ಜೀವನಕ್ಕೆ ಸರಳ ಮಾರ್ಗಗಳು 📢 ಉದ್ಯೋಗ ಮಾಹಿತಿ ಗ್ರಾಮಾಂತರ ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ – 10ನೇ ತರಗತಿ ಪಾಸಾದ ಮಹಿಳೆಯರಿಗೆ ಅವಕಾಶ! 📢 ಉದ್ಯೋಗ ಮಾಹಿತಿ ಕಲಬುರಗಿ ಜಿಲ್ಲಾ ನ್ಯಾಯಾಲಯ ನೇಮಕಾತಿ 2026 – 29 ಹುದ್ದೆಗಳಿಗೆ ಅರ್ಜಿ ಆಹ್ವಾನ ಕೃಷಿ / ರೈತ ಲೋಕ (Agriculture / Farmers World). ಡಿಸೆಂಬರ್‌ನಲ್ಲಿ ಕಲ್ಲಂಗಡಿ ಬಿತ್ತನೆಗೆ ಆದ್ಯತೆ ನೀಡಿ; 60–75 ದಿನಗಳಲ್ಲಿ ಫಸಲು ಪಡೆಯಲು ರೈತರಿಗೆ ಉತ್ತಮ ಅವಕಾಶ! ಪಂಚಾಯತ್ ರಾಜ್ ಪಂಚಾಯತ್ ರಾಜ್ ವ್ಯವಸ್ಥೆ KPSC, FDA, SDA, PSI, PDO, KAS ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ 📢 ಉದ್ಯೋಗ ಮಾಹಿತಿ ಇಂಡಿಯನ್ ಆಯಿಲ್ ನೇಮಕಾತಿ 2026: 409 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಇತಿಹಾಸ ಕದಂಬ ಸಾಮ್ರಾಜ್ಯ: ಕರ್ನಾಟಕದ ಮೊದಲ ರಾಜವಂಶದ ಉದಯ ಮತ್ತು ಪತನ ರಾಜಕೀಯ ಸವಾಲುಗಳ ನಡುವೆಯೂ ಪಕ್ಷವನ್ನು ಕಟ್ಟಿ ಬೆಳೆಸಿದ ‘ಕಾಂಗ್ರೆಸ್ ಶಕ್ತಿ’ ಸೋನಿಯಾ ಗಾಂಧಿ.
ರಾಜಕೀಯ

ಸವಾಲುಗಳ ನಡುವೆಯೂ ಪಕ್ಷವನ್ನು ಕಟ್ಟಿ ಬೆಳೆಸಿದ ‘ಕಾಂಗ್ರೆಸ್ ಶಕ್ತಿ’ ಸೋನಿಯಾ ಗಾಂಧಿ.

Sugandha
ವರದಿ: Sugandha ಮುಖ್ಯ ಸಂಪಾದಕರು (Chief Editor)
3 ನಿಮಿಷ ಓದು 60 ವೀಕ್ಷಣೆಗಳು

ವಿದೇಶದಲ್ಲಿ ಭಾರತೀಯ ಮೂಲದವರು ಪ್ರಮುಖ ಹುದ್ದೆ ಪಡೆದರೆ ಸಂಭ್ರಮಿಸುವ ಭಾರತೀಯರ ಕೆಲವು ಮನಸ್ಸುಗಳು, ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ವಿಕೃತ ಭಾವದಿಂದ ಟೀಕಿಸುತ್ತಾರೆ.

ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಮತ್ತು ಸಾಮಾಜಿಕ ಚಳವಳಿಯಲ್ಲಿ ಅನೇಕ ವಿದೇಶಿಯರು ತಮ್ಮದೇ ಆದ ಕೊಡುಗೆಗಳನ್ನು ನೀಡಿ ಸಂಪೂರ್ಣವಾಗಿ ತಮ್ಮ ಬದುಕನ್ನ ಈ ದೇಶಕ್ಕೆ ಸಮರ್ಪಿಸಿಕೊಂಡಿದ್ದಾರೆ, ಇವರಲ್ಲಿ ಸಿಸ್ಟರ್ ನಿವೇದಿತ, ಅನಿಬೆಸೆಂಟ್, ಮೀರಾ ಬೆನ್, ಸ್ವಾಮಿಯಲ್ ಇವಾನ್ ಸ್ಟ್ರೋಕ್ ಸತ್ಯಾನಂದ ಹೆಸರಿನಲ್ಲಿ, ಸಿ, ಎಫ್, ಆಂಡ್ರೋಸ್ ಧೀನ ಬಂಧು ಹೆಸರಿನಲ್ಲಿ, ಬಡವರು ಮತ್ತು ಕುಷ್ಟರೋಗಿಗಳ ಸೇವೆಯಲ್ಲಿ ಮದರ್ ತೆರೇಸಾ, ಕೆಲವು ವಿದೇಶಿ ಪತ್ರಕರ್ತರು. ಈ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಕೆಲವರು ಬುಡಕಟ್ಟು ಜನರ ಕಲ್ಯಾಣಕ್ಕಾಗಿ, ಆದಿವಾಸಿ ಜನಾಂಗದ ಜನರ ಕಲ್ಯಾಣಕ್ಕಾಗಿ, ಬಡವರ ಕಲ್ಯಾಣಕ್ಕಾಗಿ, ಕಾರ್ಮಿಕರ ಕಲ್ಯಾಣಕ್ಕಾಗಿ ದುಡಿದಿದ್ದಾರೆ. ಸ್ವಾತಂತ್ರ ಚಳುವಳಿಯಲ್ಲಿಯೂ ಸಹ ಸಕ್ರಿಯವಾಗಿ ಪಾಲ್ಗೊಂಡು ಮಹಾತ್ಮ ಗಾಂಧೀಜಿ ರವರ ಜೊತೆ, ಜೊತೆಯಲಿ, ಹೋರಾಟ ಮಾಡಿದ್ದಾರೆ.
ಹಲವಾರು ದಶಕಗಳ ಹಿಂದೆಯೇ ಭಾರತದಲ್ಲಿ ರಾಜೀವ್ ಗಾಂಧಿ ಅವರನ್ನು ವಿವಾಹವಾಗಿ ಭಾರತಕ್ಕೆ ಬಂದು, ಭಾರತದ ಸಂಸ್ಕೃತಿ, ಆಚಾರ ವಿಚಾರಗಳಿಗೆ, ತಮ್ಮನ್ನು ಸಮರ್ಪಿಸಿಕೊಂಡು ಭಾರತೀಯರಾಗಿ ಭಾರತದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ, ಲೋಕಸಭಾ ಸದಸ್ಯರಾಗಿ ಹಲವಾರು ಬಾರಿ ಆಯ್ಕೆಯಾಗಿ, ರಾಜ್ಯಸಭಾ ಸದಸ್ಯರಾಗಿ ಈಗ ಕರ್ತವ್ಯವನ್ನ ನಿರ್ವಹಿಸುತ್ತಿರುವ, 2004ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಶ್ರೀಮತಿ ಸೋನಿಯಾ ಗಾಂಧಿ ರವರು ಇಟಾಲಿ ದೇಶದವರು ಎನ್ನುವ ಕಾರಣಕ್ಕೆ, ಕೆಲವು ವಿಕೃತ ಮನಸ್ಸಿನ ವ್ಯಕ್ತಿತ್ವಗಳು ಸದಾಕಾಲ ಅವರನ್ನು ಟೀಕಿಸುವುದರಲ್ಲಿ ಕಾಲ ಕಳೆಯುತ್ತಾರೆ. ಆದರೆ ಇಂತಹ ವಿಕೃತ ಮನಸ್ಸುಗಳಿಗೆ ವಿದೇಶದಲ್ಲಿ ಭಾರತದ ಮೂಲದ ಕಮಲ ಹ್ಯಾರಿಸ್ ಉಪರಾಷ್ಟ್ರಪತಿಯಾದರೆ ಎಲ್ಲಿಲ್ಲದ ಆನಂದ. ಅದೇ ರೀತಿಯಲ್ಲಿ ನಮ್ಮ ದೇಶದ ಮೂಲದವರು ಎಂದು ಬ್ರಿಟನ್ ನಲ್ಲಿ ಸುನಕ್ ಪ್ರಧಾನಿಯಾದರೆ ಎಲ್ಲಿಲ್ಲದ ಸಂಭ್ರಮ. ಅದೇ ರೀತಿಯಲ್ಲಿ ಅಮೆರಿಕ, ಬ್ರಿಟನ್, ಮತ್ತು ಇತರ ದೇಶಗಳಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಚುನಾವಣೆಗಳಲ್ಲಿ ಆಯ್ಕೆಯಾದರೆ ಸಂಭ್ರಮಿಸುವಂತಹ, ಈ ಮನಸ್ಸುಗಳಿಗೆ ಹಲವಾರು ದಶಕಗಳ ಹಿಂದೆಯೇ ಈ ದೇಶದಲ್ಲಿ ಬಂದು ನೆಲೆಸಿರುವ ಶ್ರೀಮತಿ ಸೋನಿಯಾ ಗಾಂಧಿಯವರ ಬಗ್ಗೆ ಮಾತ್ರ ಅಸಹನೆ. ತನ್ನ ಪತಿಯನ್ನ ಕಳೆದುಕೊಂಡು ಈ ದೇಶದಲ್ಲಿಯೇ ಉಳಿದು ಈ ದೇಶದ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಂತಹ ಇವರ ಬಗ್ಗೆ ಪೂರ್ವಾಗ್ರಹ ಪೀಡಿತವಾದಂತ ಮಾತುಗಳು ಮತ್ತು ಟೀಕೆಗಳು ಆಡುವ ಮನಸ್ಸುಗಳ ಇಬ್ಬದಿ ನೀತಿಗೆ ಏನನ್ನಬೇಕು ತಿಳಿಯುತ್ತಿಲ್ಲ. ಯಾರು ಎಲ್ಲಿ ಹುಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ, ಯಾರು ಯಾವ ದೇಶಕ್ಕೆ, ಯಾವ ಸಂಸ್ಕೃತಿಗೆ, ತಮ್ಮನ್ನು ಅರ್ಪಿಸಿಕೊಂಡಿದ್ದಾರೆ, ಯಾವ ಮಣ್ಣಿಗಾಗಿ ಬದುಕುತ್ತಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ.

ಯಾರು ಎಷ್ಟೇ ಬೊಬ್ಬೆ ಹೊಡೆದರು 2004ರಲ್ಲಿ ಸೋನಿಯಾ ಗಾಂಧಿ ರವರು ಬಯಸಿದ್ದರೆ ದೇಶದ ಪ್ರಧಾನ ಮಂತ್ರಿ ಆಗುವುದನ್ನು ಯಾರು ತಡೆಯಲು ಆಗುತ್ತಿರಲಿಲ್ಲ. ಅವರು ಪ್ರಧಾನಿ ಹುದ್ದೆಯನ್ನು ತ್ಯಜಿಸುವುದರ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಕಾರಣವಾದ ಡಾ. ಮನಮೋಹನ್ ಸಿಂಗ್ ಇವರನ್ನು ಪ್ರಧಾನಮಂತ್ರಿಯನ್ನಾಗಿ ಆಯ್ಕೆ ಮಾಡಿ, ದೇಶದ ಬಡ ಮತ್ತು ಮಧ್ಯವರ್ಗದ ಜನರ ಬದುಕನ್ನು ಬದಲಾಯಿಸಲು ಸಾಧ್ಯವಾಯಿತು. ತಮ್ಮದೇ ಆದ ಆರ್ಥಿಕ ಚಿಂತನೆಗಳ ಮೂಲಕ ಬಲಿಷ್ಠವಾದ ಆರ್ಥಿಕತೆಯನ್ನು ದೇಶಕ್ಕೆ ಕಟ್ಟಿಕೊಡುವಲ್ಲಿ ಡಾ ಸಿಂಗ್ ರವರು ಪ್ರಮುಖ ಕಾರಣಕರ್ತರಾಗಿದ್ದಾರೆ.

ನಾಗನಗೌಡ ಸಿ ಕೆ

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 14 ಲೇಖನಗಳು

Sugandha

Sugandha ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment